ಸಯನೈಡ್‍ಗಳು
	-ಅಓ ಗುಚ್ಛವುಳ್ಳ ಕಾರ್ಬನಿಕ ಮತ್ತು ಅಕಾರ್ಬನಿಕ ಸಂಯುಕ್ತಗಳ ಸರ್ವನಾಮ. ಇವು ಹೈಡ್ರೊಜನ್ ಸಯನೈಡ್ ಅಥವಾ ಹೈಡ್ರೊಸಯನಿಕ್ ಆಮ್ಲದಿಂದ ವ್ಯುತ್ಪನ್ನವಾದ ಲವಣಗಳು. ಅನೇಕ ಸಯನೈಡುಗಳು ಪ್ರಬಲ ವಿಷಗಳು.

	ಹೈಡ್ರೊಜನ್ ಸಯನೈಡ್ ಎರಡು ರೂಪಗಳಲ್ಲಿ ಲಭ್ಯ: ಊಅಓ ಮತ್ತು ಊಓಅ. ಮೊದಲನೆಯದರ ಕಾರ್ಬನಿಕ ವ್ಯುತ್ಪನ್ನಗಳನ್ನು ನೈಟ್ರೈಲ್ ಅಥವಾ ಸಯನೈಡುಗಳೆಂದೂ ಎರಡನೆಯದ್ದರನ್ನು ಐಸೊನೈಟ್ರೈಲ್ ಅಥವಾ ಐಸೊಸಯನೈಡುಗಳೆಂದೂ ಕರೆಯುತ್ತಾರೆ.

	ಅಕಾರ್ಬನಿಕ ಸಯನೈಡುಗಳಿಗೂ ಹ್ಯಾಲೈಡುಗಳಿಗೂ ಬಲು ಸಾಮ್ಯವಿದೆ ಎಂದೇ, ಹ್ಯಾಲೊಜಿನಾಯ್ಡ್ ಅಥವಾ ಮಿಥ್ಯಹ್ಯಾಲೊಜನ್ ಗಳು ಎಂದೂ ಇವನ್ನು ಕರೆಯುತ್ತಾರೆ. ಸಯನೈಡ್ (-ಅಓ), ಸಯನೇಟ್ (-ಔಅಓ), ಥಯೊಸಯನೇಟ್ (-Sಅಓ), ಸಯನೊಜನ್ (-(ಅಓ)2) ಮುಂತಾದವೆಲ್ಲ ಈ ವರ್ಗದವು. ಅಕಾರ್ಬನಿಕ ಸಯನೈಡುಗಳ ಪೈಕಿ ಸೋಡಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಶಿಯಮ್ ಸಯನೈಡುಗಳಿಗೆ ವಾಣಿಜ್ಯ ಮಹತ್ತ್ವವಿದೆ. ಸಯನೈಡುಗಳಿಗೆ ಸಯನೊ ಸಂಕೀರ್ಣಗಳನ್ನು ರೂಪಿಸುವ ಸಾಮಥ್ರ್ಯವಿದೆ. ಉದಾ: ಂu(ಅಓ)2, ಂg(ಅಓ)2, ಈe(ಅಓ)6. 

	ವಿದ್ಯುಲ್ಲೇಪನದಲ್ಲಿ ಲೇಪನಸ್ನಾನವಾಗಿ (ಪ್ಲೇಟಿಂಗ್ ಬಾತ್), ಅದುರುಗಳಿಂದ ಚಿನ್ನ ಮತ್ತು ಬೆಳ್ಳಿ ಆರಿಸಲು,  ಉಕ್ಕಿನ ಮೇಲ್ಮೈಯನ್ನು ಗಡಸು ಮಾಡಲು ಅಥವಾ ನೈಟ್ರೈಡೀಕರಿಸಲು (ಕೇಸ್ ಹಾರ್ಡನಿಂಗ್), ಪೀಡೆನಾಶಕಗಳ (ಪೆಸ್ಟಿಸೈಡ್) ತಯಾರಿಯಲ್ಲಿ, ವಿಶ್ಲೇಷಕ ರಸಾಯನವಿಜ್ಞಾನದಲ್ಲಿ ಲೋಹಗಳನ್ನು ಪ್ರತ್ಯೇಕಿಸಲು ಸಯನೈಡುಗಳ ಬಳಕೆ ಉಂಟು.	
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ